FDA 2008 Indian constitution questions
FDA 2008 Indian constitution questions
✍️ *FDA-2008ರಲ್ಲಿ ಕೇಳಿದ ಭಾರತ ಸಂವಿಧಾನದ ಮೇಲಿನ ಪ್ರಶ್ನೋತ್ತರಗಳು*, 👇👇👇
1) ನಮ್ಮ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದವರು ಯಾರು?
*ಡಾಕ್ಟರ್ ಬಿಆರ್ ಅಂಬೇಡ್ಕರ್*
2) ಕೆಳಗಿನ ಯಾವ ಪ್ರಕರಣದಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಭಾವಿ ತಳ್ಳಿಹಾಕುವ ಸಿದ್ಧಾಂತವನ್ನು ವಿಧಿಸಿತು?
*ಗೋಲಕನಾಥ್V/S ಪಂಜಾಬ್ ರಾಜ್ಯ*
3) ಭಾರತದ ಸಂವಿಧಾನದ ಯಾವ ಅನುಚ್ಛೇದವು ವಿತ್ ಆಯೋಗವು ಸ್ಥಾಪಿಸಲಾಯಿತು?
*280ನೇ ಅನುಚ್ಛೇದ*
4) ಎಷ್ಟನೇ ತಿದ್ದುಪಡಿ ಕಾಯ್ದೆ ಯು ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನಾಗಿಸುವ 21A ವಿಧಿಯನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಿತ್ತು?
*86ನೇ ತಿದ್ದುಪಡಿ*
5) ಸಂವಿಧಾನದ19(I)(D) ವಿಧಿಯು ಖಾತರಿ ಪಡಿಸಿದ ಸ್ವತಂತ್ರವು?
*ದೇಶದಾದ್ಯಂತ ಸಂಚರಿಸುವ ಸ್ವಾತಂತ್ರ್ಯ*
6) ಸಂವಿಧಾನದ ಎಷ್ಟನೆ ಅನುಚ್ಛೇದವು ಭಾರತದ ರಾಷ್ಟ್ರಪತಿ ಅವರಿಗೆ ಕೆಲವು ರಕ್ಷಣೆ ಮತ್ತು ವಿನಾಯತಿಗಳನ್ನು ಖಾತ್ರಿಪಡಿಸುತ್ತದೆ?
*361ನೇ ಅನುಚ್ಛೇದ*
7) ಎಷ್ಟನೇ ತಿದ್ದುಪಡಿ ಕಾಯ್ದೆಯು ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳನ್ನು(51- ಅನುಚ್ಛೇದ)?
*1976ರ 42ನೇ ತಿದ್ದುಪಡಿ ಕಾಯ್ದೆ*
8) ಭಾರತದ ರಾಷ್ಟ್ರಪತಿಯವರಿಗೆ ಭಾರತದ ಸಂವಿಧಾನದ ಎಷ್ಟನೆ ಅನುಚ್ಛೇದವು ಅಟಾರ್ನಿ ಜನರಲ್ ನೇಮಕ ಮಾಡುವ ಅಧಿಕಾರ ನೀಡಿದೆ?
*76ನೇ ಅನುಚ್ಛೇದ*
9) ಭಾರತದ ಸರ್ವೋಚ್ಚ ನ್ಯಾಯಾಲಯವು ಘೋಷಿಸಿದ ಯಾವುದೇ ಕಾನೂನು ಇತರ ಎಲ್ಲ ನ್ಯಾಯಾಲಯಗಳಿಗೆ ಬಂಧನಕಾರಕವಾಗಿರುತ್ತದೆ ಮತ್ತು ಅನ್ವಯವಾಗುತ್ತದೆ ಎಂಬುದನ್ನು ಒಳಗೊಂಡಿರುವುದು?
*ಸಂವಿಧಾನದ141ನೇ ಅನುಚ್ಛೇದ*
10) ಕಚೇರಿಗಳಲ್ಲಿ ಅಧಿಕೃತ ಭಾಷೆಯನ್ನಾಗಿ ಆಂಗ್ಲ ಭಾಷೆಯನ್ನು ಬಳಸಿಕೊಳ್ಳಲು ಸಂವಿಧಾನವು ಪ್ರಾರಂಭದಲ್ಲಿ ನೀಡಿದ ಅನುಮತಿಯನ್ನು ಬಳಿಕ ಇದರ ಮೂಲಕ ಹದಿನೈದು ವರ್ಷಗಳವರೆಗೆ ವಿಸ್ತರಿಸಲಾಯಿತು?
*ಸಂಸತ್ತು ಮಾಡಿದ ಶಾಸನ*
11) 13ನೇ ಅನುಚ್ಛೇದದ ಅರ್ಥ ವ್ಯಾಪ್ತಿಯಲ್ಲಿ 368ನೇ ಅನುಚ್ಛೇದದನ್ವಯ ಮಾಡಿದ ಚುಟು ಪಡೆಯನ್ನು ಶಾಸನ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸುವ 3ನೇ ಉಪ ವಿಧಿಯನ್ನು13ನೇ ಅನುಚ್ಛೇದ ಕ್ಕೆ ಸೇರಿದ ಸಂವಿಧಾನಿಕ ತಿದ್ದುಪಡಿ ಯಾವುದು?
*24ನೇ ತಿದ್ದುಪಡಿ*
12) ಸಂವಿಧಾನದ ಎಷ್ಟನೇ ಅನುಚ್ಛೇದವು ರಾಜ್ಯಕ್ಕೆ ರಾಜ್ಯಪಾಲರ ಹುದ್ದೆಯನ್ನು ಒದಗಿಸಿದೆ?
*153ನೇ ಅನುಚ್ಛೇದ*
13) ಕೆಳಗಿನ ಯಾವುದು ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕಾಗಿ ಉಳಿದಿಲ್ಲ?
*ಆಸ್ತಿಯ ಹಕ್ಕು*
14) ಕೆಳಗಿನ ಯಾವ ವಿಧದ ಮೂಲಭೂತ ಹಕ್ಕು ಅಸ್ಪೃಶ್ಯತೆಯ ನಿರ್ವಹಣೆಯನ್ನು ಒಳಗೊಂಡಿದೆ?
*ಸಮಾನತೆಯ ಹಕ್ಕು*
15) ಮೂಲಭೂತ ಹಕ್ಕುಗಳನ್ನು ಜಾರಿಗೆ ತರುವ ಬಲವಂತ ಮಾಡಲು ರಿಟ್ ಅಥವಾ ಆದೇಶವನ್ನು ಇವರು ಕೊಡಿಸಬಹುದು?
*ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ*
16) ಭಾರತದ ರಾಷ್ಟ್ರಪತಿಯವರು ಆರಿಸಲ್ಪಡುವುದು?
*ಕೇಂದ್ರ ಸಂಸತ್ತಿನ ಎರಡು ಸದನಗಳ ಸದಸ್ಯರು ಮತ್ತು ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರಿಂದ*
17) ಲೋಕಸಭೆಯ ರಚನೆಯಾದ 50ನೆಯ ವರ್ಷ ಎಂದು ಯಾವ ವರ್ಷವನ್ನು ಗುರುತಿಸಲಾಗಿದೆ?
*2002*
18) ಯಾವ ವರ್ಷದಲ್ಲಿ 42ನೇ ತಿದ್ದುಪಡಿ ಕಾಯ್ದೆಯು ಮೂಲಭೂತ ಕರ್ತವ್ಯಗಳು ಸಂಬಂಧಿಸಿದ ಹೊಸ ಅಧ್ಯಯನವನ್ನು ಸವಿಧಾನದಲ್ಲಿ ಅಳವಡಿಸಲಾಗಿದೆ?
*1976*
19) ಉಪರಾಷ್ಟ್ರಪತಿ ಅವರು ಹೇಗೆ ಚುನಾಯಿಸಲ್ಪಡುತ್ತಾರೆ?
*ಸಂಸತ್ತಿನ ಎರಡು ಸದನಗಳ ಸದಸ್ಯರಿಂದ ಕೂಡಿದ ನಿರ್ವಾಚಕ ಗಣದಿಂದ*
20) ಸಂಸತ್ತಿನಲ್ಲಿ ಕರ್ನಾಟಕಕ್ಕೆ ನಿಗದಿಯಾದ ಸದಸ್ಯರ ಸಂಖ್ಯೆಯನ್ನು ಸೂಚಿಸುವ ಕೆಳಗಿನ ಯಾವ ಹಂಚಿಕೆ ಸರಿಯಾಗಿದೆ?
*ರಾಜ್ಯಸಭೆ12. ಲೋಕಸಭೆ 28*
====================
🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏
====================

0 Comments:
Please do not enter any spam link in the comment box